ಬೆಂಗಳೂರು : ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲಾಗಿರುತ್ತದೆ. ಆ ದಿನ ಆಯಾ ದೇವರನ್ನು ಪೂಜಿಸಿದರೆ.ಆ ದೇವರ ಅನುಗ್ರಹ ಖಂಡಿತವಾಗಿಯೂ ಸಿಗುತ್ತದೆ .
*ಭಾನುವಾರ ಸೂರ್ಯ ದೇವನಿಗೆ ಮೀಸಲು. ಭಾನುವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ನಮಸ್ಕಾರವನ್ನು ಮಾಡಿ, ನೈವೇದ್ಯವಾಗಿ ಪಾಯಸ ಇಟ್ಟು ಸೂರ್ಯ ದೇವನಿಗೆ ಸಮರ್ಪಿಸಬೇಕು. ಇದರಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳಬಹುದು.
*ಸೋಮವಾರ ಶಿವಿನಿಗೆ ಪ್ರಿಯವಾದ ದಿನ. ಆ ದಿನ ಮಹಾಶಿವನಿಗೆ ಅಕ್ಕಿ ಬೆಲ್ಲ,ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.
* ಮಂಗಳವಾರದ ದಿನ ಆಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು.ಆ ದಿನ ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಎರಡು ನಿಂಬೆಹಣ್ಣಿನ ಸಿಪ್ಪೆಯಿಂದ ದೀಪಾರಾಧನೆ (ನಿಂಬೆಹಣ್ಣಿನ ದೀಪ) ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ.
* ಬುಧುವಾರದ ದಿನ ಶ್ರೀ ಕೃಷ್ಣನಿಗೆ ತುಂಬಾ ಪ್ರೀತಿಕರವಾದ ದಿನ ತುಳಸಿ ಎಲೆಗಳಿಂದ ಶ್ರೀ ಕೃಷ್ಣನನ್ನು ಪೂಜಿಸಿದರೆ ಅಂದು ದಿಗ್ವಿಜಯ ಆಗುತ್ತದೆ.
* ಗುರುವಾರದ ದಿನ ರಾಘವೇಂದ್ರ ಸ್ವಾಮಿ, ಸಾಯಿಬಾಬಾ ,ದತ್ತಾತ್ರೇಯ ಸ್ವಾಮಿಯನ್ನು ಪೂಜೆ ಮಾಡಿದರೆ ಶೀಘ್ರದಲ್ಲಿ ಅನುಗ್ರಹ ಸಿಗುತ್ತದೆ.
* ಶುಕ್ರವಾರ ಅಂದರೆ ಮಹಾಲಕ್ಷ್ಮೀಗೆ ತುಂಬಿ ಪ್ರೀತಿಕರವಾದ ದಿನ.ಆದ್ದರಿಂದ ಆ ದಿನ ಕೆಂಪು,ಹಸಿರು,ಬಣ್ಣದ ವಸ್ತ್ರವನ್ನು ಧರಿಸಿ ದೀಪಾರಾಧನೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ.
* ಶನಿವಾರದ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜೆ ಮಾಡಿದರೆ ಸಂಕಷ್ಟದಿಂದ ನಾವು ದೂರಾಗಬಹುದು. ಹಾಗೆಯೇ ಆ ದಿನ 8 ಬಾದಾಮಿ ಹಣ್ಣು,ಉದ್ದಿನ ಬೇಳೆ, ಕಪ್ಪು ಎಳ್ಳನ್ನು ದಾನ ಮಾಡಿದರೆ ಶನೈಶ್ಚರ ಸ್ವಾಮಿಯ ಕೃಪೆಯನ್ನು ಪಡೆಯಬಹುದು.