ಬೆಂಗಳೂರು : ಮನುಷ್ಯನಾಗಿ ಹುಟ್ಟಿದ ನಂತರ ಜೀವನ ನಿರ್ವಹಣೆಗಾಗಿ ಯಾವುದಾದರೂ ಒಂದು ಕೆಲಸ ಮಾಡಲೇಬೇಕು. ಕೆಲವರು ವ್ಯಾಪಾರ ಮಾಡಿದರೆ, ಕೆಲವರು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಾರೆ. ಕೆಲವರಂತೂ ಯಾವುದೇ ಉದ್ಯೋಗ ಮಾಡದೆ ಸೋಮಾರಿಗಳಾಗಿ ಕಾಲಕಳೆಯುತ್ತಾರೆ. ಯಾರೇ ಆಗಲಿ ಎಂತಹ ಕೆಲಸ ಮಾಡುತ್ತಾರೆಂದು ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಹೇಳಬಹುದಂತೆ. ಹೀಗೆ ಹೇಳುವುದು ವಾಸ್ತು ಅಥವಾ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಲ್ಲದೆ, ಆಕ್ಸ್ ಫರ್ಡ್ ಯೂನಿವರ್ಸಿಟಿ ಸಂಶೋಧಕರು ಅನೇಕ ಜನರ ಹುಟ್ಟಿದ ತಿಂಗಳುಗಳನ್ನು ಪರಿಶಿಲಿಸಿ ಈ ನಿರ್ಣಯಕ್ಕೆ ಬಂದಿದ್ದಾರಂತೆ.
*ಜನವರಿ : ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚಾಗಿ ಸರಕಾರಿ ಸಂಬಂಧಿತ ಕೆಲಸಗಳನ್ನು ಮಾಡುತ್ತಾರೆ. ಮುಖ್ಯವಾಗಿ ಬಿಲ್ ಕಲೆಕ್ಟರ್ ಕೇಡರ್ ಉದ್ಯೋಗ ಮಾಡುತ್ತಾರಂತೆ.
*ಫೆಬ್ರವರಿ : ಈ ತಿಂಗಳಲ್ಲಿ ಜನಿಸಿದವರು ಕಲಾವಿದರಾಗಿ ದುಡಿಯುತ್ತಾರೆ. ಒಳ್ಳೆಯ ಕಲಾವಿದರಾಗಿದ್ದು ,ತಮ್ಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾರೆ.
*ಮಾರ್ಚ್: ಈ ತಿಂಗಳಲ್ಲಿ ಜನಿಸಿದವರು ಏರ್ ಲೈನ್ಸ್ ನಲ್ಲಿ ಕೆಲಸಮಾಡುತ್ತಾರೆ. ವಿಮಾನ ಅಥವಾ ಹೆಲಿಕಾಪ್ಟರ್ ಪೈಲೆಟ್ ಆಗಿ ಕೆಲಸಮಾಡಬಹುದು.
*ಏಪ್ರಿಲ್ : ಈ ತಿಂಗಳಲ್ಲಿ ಹುಟ್ಟಿದವರು ಅನುವಾದಕರಾಗಿರುತ್ತಾರೆ. ತಮ್ಮ ಮಾತೃಭಾಷೆಯ ಸಾಹಿತ್ಯದಲ್ಲಿ ಹಿಡಿತವಿರುತ್ತದೆ.
*ಮೇ : ಈ ತಿಂಗಳಲ್ಲಿ ಹುಟ್ಟಿದವರು ಇಂಜಿನಿಯರಿಂಗ್, ಮೆಡಿಸಿನ್, ಡಿಪ್ಲೊಮಾ ಮುಂತಾದ ವೃತ್ತಿ ಕೋರ್ಸ್ ಗಳಲ್ಲಿ ಉದ್ಯೋಗ ಮಾಡಿ ನೆಲೆ ಕಂಡುಕೊಳ್ಳುತ್ತಾರೆ.
*ಜೂನ್ : ಈ ತಿಂಗಳಲ್ಲಿ ಜನಿಸಿದವರಿಗೆ ನಾಯಕತ್ವದ ಗುಣಗಳಿರುತ್ತವೆ.ಇವರು ಸಂಸ್ಥೆಗಳ ಸಿ.ಈ.ಓ ಗಳಾಗಿ ಇಲ್ಲವೆ ಎಂಡಿ ಗಳಾಗಿ ಕೆಲಸಮಾಡುತ್ತಾರೆ.
*ಜುಲೈ : ಈ ತಿಂಗಳಲ್ಲಿ ಜನಿಸಿದವರು ಹೆಚ್ಚಾಗಿ ಸಿವಿಲ್ ಇಂಜಿನಿಯರ್ ಗಳಾಗಿ ಇಲ್ಲವೇ ಕಾಂಟ್ರಾಕ್ಟರ್ ಗಳಾಗಿ ಕೆಲಸಮಾಡುತ್ತಾರೆ. ವಿದ್ಯಾಭ್ಯಾಸ ವಿಲ್ಲದಿದ್ದರೆ ಕೂಲಿಗಳಾಗಿ ದುಡಿಯುತ್ತಾರೆ.
*ಆಗಸ್ಟ್ : ಈ ತಿಂಗಳಲ್ಲಿ ಜನಿಸಿದವರಿಗೆ ಕೆಲಸ ದೊರೆಯುವುದು ಬಹಳ ಕಷ್ಟ. ಯಾವಾಗಲೂ ಕಷ್ಟದಲ್ಲಿರುತ್ತಾರೆ.
*ಸೆಪ್ಟೆಂಬರ್ : ಈ ತಿಂಗಳಲ್ಲಿ ಹುಟ್ಟಿದವರಿಗೆ ಯಾವುದೇ ಕೆಲಸವಾದರೂ ಬಹಳ ಸುಲಭವಾಗಿ ದೊರೆಯುತ್ತದೆ. ಯಾವುದೇ ಕೆಲಸವನ್ನಾದರೂ ಮಾಡುವ ಶಕ್ತಿ ಇವರಲ್ಲಿರುತ್ತದೆ.
*ಅಕ್ಟೋಬರ್ : ಈ ತಿಂಗಳಲ್ಲಿ ಜನಿಸಿದವರು ರಾಜಕೀಯದಲ್ಲಿ ವಿಜೃಂಭಿಸುತ್ತಾರೆ. ರಾಜಕೀಯ ನಾಯಕರುಗಳಾಗಿ ಜೀವನದಲ್ಲಿ ನೆಲೆ ನಿಲ್ಲುತ್ತಾರೆ.
*ನವಂಬರ್ : ಈ ತಿಂಗಳಲ್ಲಿ ಜನಿಸಿದವರು ಸಮಾಜ ವಿದ್ರೋಹಿ ಕೆಲಸಗಳಲ್ಲಿ ತೊಡಗುತ್ತಾರೆ. ಹತ್ಯೆಗಳನ್ನು ಮಾಡಿ ಹಂತಕರಾಗುತ್ತಾರೆ.
*ಡಿಸೆಂಬರ್ : ಈ ತಿಂಗಳಲ್ಲಿ ಹುಟ್ಟಿದವರು ವೈದ್ಯರಾಗಿರುತ್ತಾರೆ. ಡೆಂಟಿಸ್ಟ್ ಆಗಲು ಹೇರಳವಾದ ಅವಕಾಶಗಳು ದೊರೆಯುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ