ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರ ರೂಪದಲ್ಲಿ ಪೂಜೆ ಮಾಡುತ್ತಾರೆ. ಈ ಗೋಮಾತೆ ಕನಸಿನಲ್ಲಿ ಬಂದ್ರೆ ನಿಮ್ಮ ಪಾಲಿಗೆ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತಾಳೆ, ಎಂಬುದಾಗಿ ಹೇಳಲಾಗುತ್ತದೆ. ನಿಮ್ಮ ಕನಸಿನಲ್ಲಿ ಹಸು ಕಾಣಿಸಿಕೊಂಡರೆ ಅದು ಏನನ್ನು ಸೂಚಿಸುತ್ತದೆ ಹಾಗು ಯಾವ ರೀತಿಯ ಹಸುಗಳು ಕಂಡ್ರೆ ಅದಕ್ಕೆ ಏನು ಅರ್ಥ ಅನ್ನೋದನ್ನ ತಿಳಿಯೋಣ.
ನಿಮ್ಮ ಕನಸಿನಲ್ಲಿ ದೊಡ್ಡ ಹಸು ಕಾಣಿಸಿ ಕೊಂಡ್ರೆ ನೀವು ಹಲವು ರೋಗಗಳಿಂದ ಬೇಗನೆ ಗುಣಮುಖರಾಗುತ್ತೀರಿ ಎಂದರ್ಥ ನಿಮ್ಮ ಕನಸಿನಲ್ಲಿ ಶಾಂತವಾಗಿ ನಿಂತಿರುವಂತ ಹಸು ಕಾಣಿಸಿ ಕೊಂಡ್ರೆ ನಿಮ್ಮ ಬಹುದಿನದ ಕನಸು ಹಿಡೇರುತ್ತದೆ, ಜೊತೆಗೆ ನಿಮ್ಮ ಪಾಲಿಗೆ ಸುಖಕರವಾದ ದಿನಗಳು ಬರುತ್ತಿವೆ ಎಂಬುದನ್ನು ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ಹಸು ಕರು ಹಾಕುವ ರೀತಿಯಲ್ಲಿ ಬಂದ್ರೆ ನಿಮ್ಮ ಮನೆಯಲ್ಲಿ ಮಕ್ಕಳನ್ನು ಕಾಣುವ ಭಾಗ್ಯ ಬೇಗನೆ ಬರಲಿದೆ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕನಸಿನಲ್ಲಿ ಹಸು ಹಾಗು ಕರು ಒಟ್ಟಿಗೆ ಕಂಡ್ರೆ ನೀವು ದಾಂಪತ್ಯ ಜೀವನವನ್ನು ಬಯಸುತ್ತಿದ್ದೀರಿ ಎಂಬುದಾಗಿ ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ಹಸುವಿನ ಹಾಲು ಕರೆಯುವ ರೀತಿ ಕನಸು ಬಿದ್ರೆ ನೀವು ತಾಯಿ ಆಗುವ ಶುಭಗಳಿಗೆ ಬೇಗನೆ ಬರಲಿದೆ ಎಂಬುದಾಗಿ ಸೂಚಿಸುತ್ತದೆ. ನಿಮ್ಮ ಕನಸಿನಲ್ಲಿ ಹಸು ಸತ್ತಿರುವ ರೀತಿಯಲ್ಲಿ ಕನಸು ಬಿದ್ರೆ ನಿಮಗೆ ಕಷ್ಟಗಳು ಕಾದಿವೆ, ಹಾಗು ನಿಮ್ಮ ಗ್ರಹಚಾರ ಕೆಟ್ಟದಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಯಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.