Webdunia - Bharat's app for daily news and videos

Install App

ಲಾಫಿಂಗ್ ಬುದ್ಧನ ವಿಗ್ರಹಗಳು ಮನೆಯಲ್ಲಿ ಯಾವ ಭಂಗಿಯಲ್ಲಿದ್ದರೆ ಎಂತಹ ಪರಿಣಾಮ ಉಂಟಾಗುತ್ತದೆ ಗೊತ್ತಾ…?

Webdunia
ಸೋಮವಾರ, 2 ಏಪ್ರಿಲ್ 2018 (07:16 IST)
ಬೆಂಗಳೂರು : ಬುದ್ಧ(ಲಾಫಿಂಗ್ ಬುದ್ಧ)ನ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಲಾಫಿಂಗ್ ಬುದ್ಧ ಮೆನೆಯಲ್ಲಿದ್ದರೆ, ಆ ಮನೆ ಐಶ್ವರ್ಯದಿಂದ ತುಂಬಿ ತುಳುಕುತ್ತದೆಂಬ ನಂಬಿಕೆಯಿದೆ. ಆದರೆ ಎಲ್ಲ ಲಾಫಿಂಗ್ ಬುದ್ಧನ ವಿಗ್ರಹಗಳೂ ಒಂದೇ ರೀತಿಯಲ್ಲಿ ಇರದೇ ಹಲವು ಬಗೆಯಲ್ಲಿ ಇರುತ್ತವೆ. ಇವುಗಳಲ್ಲಿ ಯಾವ ಭಂಗಿಯ ವಿಗ್ರಹವು ಮನೆಯಲ್ಲಿದ್ದರೆ ಎಂತಹ ಪರಿಣಾಮ ಉಂಟಾಗುತ್ತದೆಂದು ತಿಳಿಯೋಣ.


*ಪಾತ್ರೆ ಹಿಡಿದಿರುವ ಲಾಫಿಂಗ್ ಬುದ್ಧ : ಇಂತಹ ವಿಗ್ರಹ ಮನೆಯಲ್ಲಿದ್ದರೆ,ಜೀವನ ಸುಖಮಯವಾಗಿದ್ದು, ಆ ಮನೆಯಲ್ಲಿ ಸುಖ ಸಂತೋಷಗಳು ಸದಾಕಾಲ ಇರುತ್ತವಂತೆ.

*5 ಮಕ್ಕಳೊಂದಿಗಿರುವ ಲಾಫಿಂಗ್ ಬುದ್ಧ : ತನ್ನ ಸುತ್ತಲೂ ಐದು ಮಕ್ಕಳನ್ನು ಹೊಂದಿರುವ ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ, ಆ ಮೆನೆಯಲ್ಲಿ ಧನಾತ್ಮಕ ಶಕ್ತಿ ತುಂಬಿದ್ದು , ಎಲ್ಲರಲ್ಲೂ ಧನಾತ್ಮಕ ಶಕ್ತಿ ಪ್ರವೇಶಿಸಿಸುತ್ತದಂತೆ. ಇದರಿಂದ ತಾವು ಪ್ರಾರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವಂತೆ.


 *ಕೈಯಲ್ಲಿ ಬೀಸಣಿಗೆ ಇದ್ದರೆ : ಬೀಸಣಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿರುವ ಲಾಫಿಂಗ್ ಬುದ್ಧನ ವಿಗ್ರಹ ಮನೆಯಲ್ಲಿದ್ದರೆ, ಆ ಮನೆಯ ಸದಸ್ಯರ ಸಮಸ್ಯೆಗಳು ಸುಲಭವಾಗಿ ಪರಿಹಾರ ವಾಗುತ್ತವಂತೆ. ಜೀವನವೆಲ್ಲವೂ ಸುಖಮಯವಾಗಿರುತ್ತಂತೆ.


*ದೊಡ್ಡ ಚೀಲ ಹಿಡಿದಿದ್ದರೆ : ನಾಣ್ಯಗಳಿರುವ ದೊಡ್ಡಚೀಲದೊಂದಿಗೆ ಇರುವ ಲಾಫಿಂಗ್ ಬುದ್ಧನ ವಿಗ್ರಹವಿದ್ದರೆ, ಮಿತಿಯಲ್ಲದ ಸಿರಿ,ಸಂಪತ್ತುಗಳಿಂದ ಮನೆ ಕಂಗೊಳಿಸುತ್ತದ್ದಂತೆ, ಆರ್ಥಿಕ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತವಂತೆ.


*ಕೈಯಲ್ಲಿ ಹೂಮಾಲೆಯಿದ್ದರೆ: ಕೈಯಲ್ಲಿ ರುದ್ರಾಕ್ಷಿ ಮಾಲೆಯಂತಹ ಮಾಲೆಯನ್ನು ಹಿಡಿದಿರುವ ಲಾಫಿಂಗ್ ಬುದ್ಧನ ವಿಗ್ರಹ ಮನೆಯಲ್ಲಿದ್ದರೆ, ಮಿತಿಯಿಲ್ಲದ ಬುದ್ಧಿಶಕ್ತಿ ಲಭಿಸುತ್ತದಂತೆ. ಅಪಾರ ಜ್ಞಾನವಂತರಾಗಿ ಪರಿವರ್ತನೆಯಾಗುತ್ತಾರಂತೆ.


*ಕುಳಿತಿದ್ದರೆ : ಲಾಫಿಂಗ್ ಬುದ್ಧನ ವಿಗ್ರಹವು ಕುಳಿತಿರುವ ಭಂಗಿಯಲ್ಲಿದ್ದರೆ, ವ್ಯಕ್ತಿಗಳ ಮಧ್ಯೆ ಅನ್ಯೋನ್ಯವಾದ ಸಂಬಂಧವಿರುತ್ತದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments