ಬೆಂಗಳೂರು : ಗಂಗಾ ಜಲವನ್ನು ಪವಿತ್ರವೆಂದು ನಂಬಲಾಗಿದೆ. ಇಂತಹ ಪವಿತ್ರವಾದ ವಸ್ತುವನ್ನು ಮನೆಯಲ್ಲಿ ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕೆ. ಇಲ್ಲದಾದರೆ ಅದು ಅಪವಿತ್ರಗೊಂಡು ಮನೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ಮನೆಯಲ್ಲಿ ಗಂಗಾಜಲವನ್ನು ಎಲ್ಲಿ ಹೇಗೆ ಇಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಮನೆಯ ಕತ್ತಲ ಪ್ರದೇಶದಲ್ಲಿ ಎಂದೂ ಗಂಗಾ ಜಲವನ್ನು ಇಡಬಾರದು. ಮನೆಯ ಕತ್ತಲ ಜಾಗದಲ್ಲಿ ಗಂಗಾ ಜಲವನ್ನಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತದೆ. ಆದ್ದರಿಂದ ಯಾವಾಗಲೂ ದೇವರ ಮನೆಯಲ್ಲಿ ಗಂಗಾಜಲವನ್ನು ಇಡಿ.
ಸೋಮವಾರ ಅಥವಾ ಗುರುವಾರ ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ. ಹೀಗೆ ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ. ಬೆಳಿಗ್ಗೆ ಸ್ನಾನವಾದ ಮೇಲೆ ಹೊಸ್ತಿಲಿಗೆ ಹಾಗೂ ಮನೆಗೆಲ್ಲ ಗಂಗಾ ಜಲವನ್ನು ಹಾಕಿ. ಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ.