ಪ್ರತಿದಿನ ಮನೆಯಲ್ಲಿ ಸಂಕಷ್ಟಗಳು ಕಂಡು ಬಂದಲ್ಲಿ ಯಾಕೆ ಈ ರೀತಿ ನಡೆಯುತ್ತವೆ ಎನ್ನುವುದು ಮನಸ್ಸಿಗೆ ಬೇಸರ ತರಿಸುತ್ತದೆ. ಆದರೆ, ನಿಮ್ಮ ಮನೆಯಲ್ಲಿಯೇ ಸರಳ ಪೂಜೆಯ ಮೂಲಕ ನಕಾರಾತ್ಮಕ ಶಕ್ತಿಗಳನ್ನು ಹೊಡೆದೊಡಿಸಿ ಸಕಾರಾತ್ಮಕ ಶಕ್ತಿಗಳನ್ನು ತರಬಹುದಾಗಿದೆ.
ಮನೆಯೊಳಗೆ ನಕರಾತ್ಮಕ ಶಕ್ತಿ ಇದ್ದಾಗ ಆ ಮನೆಯಲ್ಲಿ ಯಾವಾಗಲೂ ಕಲಹ, ಜಗಳ ನಡೆಯುತ್ತಿರುತ್ತದೆ. ಅಲ್ಲದೇ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಕೂಡ ನೆಲೆಸುವುದಿಲ್ಲ. ಇದರಿಂದ ಆ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ. ಅದಕ್ಕಾಗಿ ಪ್ರತಿ ಶನಿವಾರ ತಪ್ಪದೇ ಈ ಪರಿಹಾರ ಮಾಡಿ.
ಪ್ರತಿ ಶನಿವಾರ ಸಂಜೆ ಆರು ಗಂಟೆಯ ಹೊತ್ತಿಗೆ ಒಂದು ಬಟ್ಟಲಿನಲ್ಲಿ ಹಸುವಿನ ಬೆರಣಿ, ಒಂದು ಚಮಚ ತುಪ್ಪ, ಒಂದೆರಡು ಕರ್ಪೂರ, ಸ್ವಲ್ಪ ಧೂಪದ ಪುಡಿ ಹಾಕಿ ದೇವರ ಮನೆಯಲ್ಲಿ ಪೂಜೆ ಮಾಡಿ.
ಬಳಿಕ ಆ ದೀಪವನ್ನು ಮನೆಯೆಲ್ಲಾ ಹರಡಿದರೆ ಯಾವುದೇ ನಕರಾತ್ಮಕ ಶಕ್ತಿ ಮನೆಯೊಳಗಿದ್ದರೂ ಹೊರಗೆ ಹೋಗುತ್ತದೆ. ಹಾಗೇ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ನೆಲೆಸಿರುತ್ತಾಳೆ.