ಬೆಂಗಳೂರು: ವಾರದ ಏಳು ದಿನಕ್ಕೆ ಒಂದೊಂದು ದೇವರು ಅಧಿಪತಿಗಳು. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಇಲ್ಲಿ ಎಲ್ಲ ದೇವರಿಗೂ ಇಷ್ಟವಾಗುವ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆಯಂತೆ.
ಸೋಮವಾರವೆಂದರೆ ಶಿವನಿಗೆ ಪ್ರಿಯವಾದದ್ದು. ಶಿವನಿಗೆ ಬಿಳಿ ಬಣ್ಣ ಬಹಳ ಪ್ರಿಯ. ಬಿಳಿ ಬಣ್ಣದ ಯಾವುದೇ ಪ್ರತಿಮೆಯನ್ನು ಮನೆಗೆ ಆ ದಿನ ಮನೆಗೆ ತನ್ನಿ.
ಮಂಗಳವಾರ ಮಂಗಳದೇವ ಹಾಗೂ ಹನುಮಂತನಿಗೆ ಇಷ್ಟವಾದದ್ದು.ಹಾಗಾಗಿ ಈ ದಿನ ಕೇಸರಿ ಹಾಗೂ ಕೆಂಪು ಬಣ್ಣದ ಯಾವುದಾದರೂ ಒಂದು ವಸ್ತುವನ್ನು ಮನೆಯ ದಕ್ಷಿಣ ದಿಕ್ಕಿಗೆ ಇಡಿ.
ಬುಧವಾರ ಗಣೇಶನಿಗೆ ಪ್ರಿಯವಂತೆ. ಈ ದಿನ ಹಸಿರು ಬಣ್ಣದ ಪೋಸ್ಟರನ್ನು ಮುಖ್ಯದ್ವಾರದ ಬಳಿ ಹಾಕಬೇಕಂತೆ.
ಗುರುವಾರ ಬೃಹಸ್ಪತಿಗೆ ಇಷ್ಟವಾದದ್ದು. ಬೃಹಸ್ಪತಿಯನ್ನು ಒಲಿಸಿಕೊಳ್ಳಲು ಹಳದಿ ಬಣ್ಣದ ಬಟ್ಟೆಯನ್ನು ಅಡುಗೆ ಮನೆಯಲ್ಲಿಡಿ.
ಶುಕ್ರವಾರ ಶುಕ್ರ ದೇವ ಹಾಗೂ ದೇವತೆಗಳಿಗೆ ಶುಕ್ರವಾರ ಇಷ್ಟ. ಹಾಗಾಗಿ ಈ ದಿನ ಗುಲಾಬಿ ಅಥವಾ ವರ್ಣರಂಜಿತ ಬಣ್ಣದ ಬಟ್ಟೆಯನ್ನು ದೇವರ ಮನೆಯಲ್ಲಿಡಿ.
ಶನಿವಾರ ಶನೈಶ್ಚರ ದೇವರಿಗೆ ಪ್ರಿಯವಾದದ್ದು. ನೀಲಿ ಹಾಗೂ ಕಪ್ಪು ಶನಿಗೆ ಪ್ರಿಯ. ಈ ದಿನ ನೀಲಿ ಅಥವಾ ಕಪ್ಪು ಬಣ್ಣದ ಪೇಂಟಿಂಗನ್ನು ಗೋಡೆಗೆ ಹಾಕಬೇಕಂತೆ.
ಭಾನುವಾರ ಸೂರ್ಯನಾರಾಯಣನ ದಿನ ಗುಲಾಬಿ, ಕೆಂಪು, ಕಿತ್ತಳೆ ಬಣ್ಣಕ್ಕೆ ಬಹಳ ಮಹತ್ವವಿದೆ. ಈ ಬಣ್ಣದ ಒಂದು ವಸ್ತುವನ್ನು ಮಕ್ಕಳ ಕೋಣೆಗೆ ತಂದು ಹಾಕಿದರೆ ಒಳ್ಳೆಯದಂತೆ.