ಬೆಂಗಳೂರು : ಎಲ್ಲರೂ ಪ್ರತಿದಿನ ದೇವರಿಗೆ ಪೂಜೆ ಮಾಡುತ್ತಾರೆ. ಆದರೆ ದೇವರಿಗೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಈ ಬಟ್ಟೆಯನ್ನು ಧರಿಸಬೇಡಿ. ಇದರಿಂದ ದಾರಿದ್ರ್ಯ ಹೆಚ್ಚಾಗುತ್ತದೆ.
ಪೂಜೆಗೆ ಮೊದಲು ಎಲ್ಲರೂ ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಗಳನ್ನು ಧರಿಸಿಕೊಂಡು ಪೂಜೆ ಮಾಡಬಾರದು. ದೇವರಿಗೆ ಹರಕೆ, ಸಂಕಲ್ಪ ಮಾಡುವಾಗ ಒದ್ದೆ ಬಟ್ಟೆ ಧರಿಸಬಹುದು. ಆದರೆ ಮನೆಯಲ್ಲಿ ಮಾಡುವ ನಿತ್ಯ ಪೂಜೆಗೆ ಒದ್ದೆ ಬಟ್ಟೆ ಧರಿಸಬಾರದು. ಇದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ.