ಬೆಂಗಳೂರು : ಮನೆಯ ಮುಖ್ಯದ್ವಾರವನ್ನು ತುಂಬಾ ಸ್ವಚ್ಚವಾಗಿಡಬೇಕು. ಯಾಕೆಂದರೆ ಲಕ್ಷ್ಮೀದೇವಿ ಈ ದ್ವಾರದ ಮೂಲಕವೇ ಮನೆಯೊಳಗೆ ಪ್ರವೇಶಿಸುತ್ತಾಳೆ. ಆದರೆ ಮುಖ್ಯದ್ವಾರದ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ.
ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಇಡಬಾರದು. ಇದರಿಂದ ಮನೆಗೆ ಬರುವ ಲಕ್ಷ್ಮೀ ಹಾಗೇ ಹೊರಟುಹೋಗುತ್ತಾಳೆ. ಹಾಗೇ ಮುಖ್ಯದ್ವಾರದಲ್ಲಿ ಒಣಗಿದ ತೋರಣಗಳನ್ನು ಇಡಬಾರದು. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಅಲ್ಲದೇ ಮುಖ್ಯದ್ವಾರದ ಬಳಿ ಬೆಳಕು ಇರಬೇಕು ಅದು ಕತ್ತಲಾಗಿ ಇರಬಾರದು.