ಬೆಂಗಳೂರು : ತಿರುಪತಿ ದೇವರ ದರ್ಶನ ಮಾಡಲು ಹೋಗುವ ಭಕ್ತರು ತಿಮ್ಮಪ್ಪನ ದರ್ಶನ ಮುಗಿದ ಬಳಿಕ ಸುತ್ತಲೂ ಇರುವ ಎಲ್ಲಾ ದೇವಾಲಯಗಳನ್ನೂ ದರ್ಶಿಸಿಕೊಳ್ಳಲು ಹೋಗುತ್ತಾರೆ. ಆದರೆ ಅಲ್ಲಿರುವ ಶ್ರೀಕಾಳಹಸ್ತಿ ದರ್ಶನ ಕೊನೆಯದಾಗಿ ಮಾಡಬೇಕಂತೆ. ಯಾಕೆಂದರೆ ಆ ದೇವರ ದರ್ಶನ ಮಾಡಿದ ಮೇಲೆ ಬೇರೆ ಯಾವ ದೇವಸ್ಥಾನಕ್ಕೂ ಹೋಗಬಾರದಂತೆ. ಇದಕ್ಕೆ ಕಾರಣವೆನೆಬುದು ಇಲ್ಲಿದೆ ನೋಡಿ.
ಗಾಳಿ, ಆಗಸ, ಭೂಮಿ, ನೀರು, ಬೆಂಕಿ ಇವು ಪಂಚಭೂತಗಳು. ಇವಕ್ಕೆ ಪ್ರತಿಯಾಗಿ ಭೂಮಿ ಮೇಲೆ ಪಂಚಭೂತ ಲಿಂಗಗಳಿವೆ. ಅದರಲ್ಲಿ ಒಂದು ಚಿತ್ತೂರು ಜಿಲ್ಲೆಯಲ್ಲಿನ ಶ್ರೀಕಾಲಹಸ್ತಿಯಲ್ಲಿನ ಶ್ರೀಕಾಳಹಸ್ತೀಶ್ವರ ಆಲಯದ ವಾಯುಲಿಂಗ. ಈ ದೇವಾಲಯಕ್ಕೆ ಹೋದರೆ ಸರ್ಪದೋಷ, ರಾಹುಕೇತುಗಳ ದೋಷ ಸಂಪೂರ್ಣ ನಿವಾರಣೆಯಾಗುತ್ತದೆಯಂತೆ.
ಆದರೆ ಇಲ್ಲಿ ದರ್ಶನ ಪಡೆದ ನಂತರ ನೇರವಾಗಿ ಮನೆಗೆ ಹೋಗಬೇಕೆಂದು ಇಲ್ಲಿನ ಪೂಜಾರಿಗಳು ಹೇಳುತ್ತಾರೆ. ಕಾರಣ ದೋಷ ನಿವಾರಣೆಯಾಗಬೇಕಾದರೆ ಶ್ರೀಕಾಳಹಸ್ತಿಯಲ್ಲಿ ಪಾಪಗಳನ್ನು ಬಿಟ್ಟು ಮನೆಗೆ ಹೋಗಬೇಕು. ಮತ್ತೆ ಇನ್ಯಾವುದೇ ದೇವಸ್ಥಾನಕ್ಕೂ ಹೋದರೂ ದೋಷ ನಿವಾರಣೆಯಾಗಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.