ಬೆಂಗಳೂರು : ಕೆಲವರು ವಾಸ್ತು ಶಾಸ್ತ್ರದ ವಿರುದ್ಧವಾಗಿ ಕೆಲಸ ಮಾಡಿ ಕೆಲವೊಮ್ಮೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ. ಹಾಗೇ ಈಶ್ವರ ಸ್ಥಾನವಾದ ಈಶಾನ್ಯ ಮೂಲವನ್ನು ನಿರ್ಲಕ್ಷಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಆದ್ದರಿಂದ ಈಸಾನ್ಯ ಭಾಗದಲ್ಲಿ ಇಂತಹ ಕೆಲಸಗಳನ್ನು ಮಾಡಬಾರದು.
ಮುಖ್ಯವಾಗಿ ಈಶಾನ್ಯ ಸ್ಥಾನದಲ್ಲಿ ಅಡುಗೆಯನ್ನು ಮಾಡುವುದರಿಂದ ಎಷ್ಟೇ ದುಡ್ಡು ಬಂದರೂ ಅದು ಆವಿಯಾಗಿ ಹೋಗುತ್ತದೆ. ಅಲ್ಲದೆ ದಂಪತಿಗಳ ನಡುವೆ ಜಗಳ, ತಂದೆತಾಯಿ, ಒಡಹುಟ್ಟಿದವರರ ಹಾಗೂ ಸ್ನೇಹಿತರ ಜೊತೆ ಹಾಗೇ ಅತ್ತೆ ಸೊಸೆ ಜೊತೆ ಕಲಹ ಹೆಚ್ಚಾಗುತ್ತದೆ. ಆದ್ದರಿಂದ ಆಗ್ನೇಯ ಭಾಗದಲ್ಲಿ ಅಡುಗೆ ಮಾಡಿ. ಒಂದು ವೇಳೆ ಈ ದಿಕ್ಕಿನಲ್ಲಿ ಆಗದಿದ್ದರೆ ವಾಯುವ್ಯ, ಪೂರ್ವದಿಕ್ಕಿನಲ್ಲಿ ಅಡುಗೆ ಮಾಡಬಹುದು.
ಈಶಾನ್ಯ ಭಾಗದಲ್ಲಿ ಪೊರಕೆ, ಕಸದ ಬುಟ್ಟಿಯನ್ನು ಇಡಬಾರದು. ಇಟ್ಟರೆ ಆ ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ. ಭಾರವಾದ ವಸ್ತುವನ್ನು ಈಶಾನ್ಯ ಭಾಗದಲ್ಲಿ ಇಡಬಾರದು, ಹಾಗೇ ಬಾವಿ, ಕೊಳವೆ ನೀರಿನ ಚಿಲುಮೆ ಈಶಾನ್ಯ ಭಾಗದಲ್ಲಿ ಇದ್ದರೆ ತುಂಬಾ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.