ಬೆಂಗಳೂರು : ನಿತ್ಯವು ಕೆಲವು ಆಶ್ಚರ್ಯಕರವಾದ ಘಟನೆಗಳು ಎದುರಾಗುತ್ತದೆ. ಹಾಗೆ ಪ್ರತಿನಿತ್ಯ ಒಂದಲ್ಲ ಒಂದು ಕನಸು ಬೀಳುತ್ತದೆ. ಅದರಲ್ಲಿ ಮುಖ್ಯವಾಗಿ ವ್ಯಕ್ತಿಗಳು ಮರಣ ಹೊಂದಿದ ಕನಸುಗಳು. ಈ ಕನಸುಗಳು ಕೆಲವರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಕೆಲವರಿಗೆ ಕನಸಲ್ಲಿ ತಾವೆ ಮರಣ ಹೊಂದಿದ ಕನಸು ಬೀಳುತ್ತದೆ. ಇದು ಅಶುಭವೋ, ಶುಭವೋ ಎಂಬ ಗೊಂದಲವಿರುತ್ತದೆ.
ಮನುಷ್ಯ ಗಾಢ ನಿದ್ದೆಯಲ್ಲಿದ್ದಾಗ ಪಂಚೇಂದ್ರಿಯಗಳು ಕೂಡ ವಿಶ್ರಾಂತಿಯಲ್ಲಿರುತ್ತದೆ. ಹಾಗೆ ನಿದ್ದೆಯಲ್ಲಿದ್ದಾಗ ಶರೀರ ಆತ್ಮದಿಂದ ದೂರವಿರುತ್ತದೆ. ಏಕೆಂದರೆ ಆತ್ಮ ನಿದ್ದೆಮಾಡುವುದಿಲ್ಲ. ನಿದ್ರೆಯಲ್ಲಿ ನಾವೇ ಸಾಯುತ್ತಿರುವ ಕನಸು ಬಿದ್ದರೆ ಅದಕ್ಕೆ ಭಯ ಪಡುವ ಅಗತ್ಯವಿಲ್ಲ. ಈ ಕನಸು ಬೀಳಲು ಕಾರಣ ಅವರು ಮುಂದೆ ಜೀವನದಲ್ಲಿ ಅಭಿವೃದ್ಧಿ ಕಾಣುತ್ತಿರಿ ಎಂದರ್ಥ. ಸಾಯುವ ಕನಸು ಬಿದ್ದರೆ ಮುಂದೆ ನೀವು ಒಳ್ಳೆ ಮಾರ್ಗದಲ್ಲಿ ನಡೆಯಬೇಕೆಂಬ ಸೂಚನೆಯಂತೆ. ಈ ಕನಸು ಬಿದ್ದರೆ ಅವರ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ