ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪೂಜಾ ಕೊಠಡಿ ಇರುತ್ತದೆ. ಅದರಲ್ಲಿ ದೇವರ ವಿಗ್ರಹಗಳು ಹೇಗೇ ಬೇಕೋ ಹಾಗೇ ಜೋಡಿಸುವಂತಿಲ್ಲ. ಪೂಜಾ ಮಂದಿರದಲ್ಲಿ ದೇವರ ಫೋಟೋಗಳನ್ನು ಜೋಡಿಸುವಾಗ ಕೆಲವು ನಿಯಮವನ್ನು ಅನುಸರಿಸಿದರೆ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ.
ಮನೆಯ ದೇವರ ಕೋಣೆಯಲ್ಲಿ ವಿಷ್ಣು(ವೆಂಕಟರಮಣ)ವಿನ ಯಾವುದಾದರೂ ವಿಗ್ರಹವಿದ್ದರೆ ಎಡಭಾಗದಲ್ಲಿ ಲಕ್ಷ್ಮೀದೇವಿಯನ್ನು ಇರಿಸಬೇಕು. ಹಾಗೇ ಲಕ್ಷ್ಮೀದೇವಿಯ ಪಕ್ಕದಲ್ಲಿ ಗಣಪತಿಯನ್ನು ಇರಿಸಬೇಕು. ಗಣಪತಿಯ ಪಕ್ಕದಲ್ಲಿ ಆಂಜನೇಯಸ್ವಾಮಿ ಫೋಟೋವನ್ನು ಇರಿಸಿದರೆ ಒಳ್ಳೆಯದು.
ಹಾಗೇ ವೆಂಕಟರಮಣದ ಬಲಭಾಗದಲ್ಲಿ ಶಿವಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ನಂದಿ ಇರುವ ಫೋಟೊ ಇರಿಸಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹರಿಹರರ ಸಂಗಮವಾಗಿ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ.