ಬೆಂಗಳೂರು : ಹೋದಕಡೆ ಸಮಯ ನೋಡಲು ಕೈಗೆ ವಾಚ್ ನ್ನು ಕಟ್ಟಿಕೊಳ್ಳುತ್ತೇವೆ. ಆದರೆ ನಮ್ಮ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಈ ವಾಚ್ ನ್ನು ಎಲ್ಲೆಂದರಲ್ಲಿ ಇಡುತ್ತೇವೆ. ಆದರೆ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೈಯಲ್ಲಿ ಧರಿಸಿರುವ ಗಡಿಯಾರವನ್ನು ತಮ್ಮ ದಿಂಬಿನ ಕೆಳಗೆ ಹಿಟ್ಟುಕೊಂಡು ಜನರು ಮಲಗುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡಬಾರದು. ಇದರಿಂದ ಅದರ ಶಬ್ಧದಿಂದ ನಿದ್ರೆಗೆ ಅಡ್ಡಿಯಾಗುತ್ತದೆ. ಅಲ್ಲದೇ ಅದರಿಂದ ಹೊರಬರುವ ವಿದ್ಯುತ್ಕಾಂತೀಯ ಅಲೆಗಳು ಮೆದುಳು ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಈ ಅಲೆಗಳು ಕೋಣೆಯಲ್ಲಿ ನಕರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಅದು ಮನಸ್ಸಿನ ಶಾಂತಿಗೆ ಅಡ್ಡಿಪಡಿಸುತ್ತದೆ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ. ಅಲ್ಲದೇ ಇದು ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ನಕರಾತ್ಮಕವಾಗಿಸುತ್ತದೆ.