ಬೆಂಗಳೂರು : ಪ್ರತಿಯೊಂದು ಅನ್ನದ ಅಗಳಿನ ಮೇಲೆ ತಿನ್ನುವವನ ಹೆಸರಿರುತ್ತಂತೆ ಎನ್ನುವ ಗಾದೆ ಇದೆ. ಆದರೆ ಇದರ ಜೊತೆಗೆ ಬೇರೆಯವರ ಅನ್ನ(ಊಟ)ವನ್ನು ಎಲ್ಲ ಸಮಯದಲ್ಲೂ ತಿನ್ನಬಾರದು. ಇದಕ್ಕೆ ಶಾಸ್ತ್ರವಿದೆ. ಸಮಯವಲ್ಲದ ಸಮಯದಲ್ಲಿ, ದಿನಗಳಲ್ಲಿ ಬೇರೆಯವರ ಮನೆಯ ಅನ್ನವನ್ನು ಸೇವನೆ ಮಾಡಿದ್ರೆ ತಿಂಗಳ ಪೂರ್ತಿ ಮಾಡಿದ ಪುಣ್ಯ ನಷ್ಟವಾಗುತ್ತಂತೆ. ಹಾಗೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾನಂತೆ ಎಂದು ಶಾಸ್ತ್ರ ಹೇಳುತ್ತದೆ.
ಶಾಸ್ತ್ರಗಳ ಪ್ರಕಾರ ಯಾವ ಯಾವ ದಿನದಂದು ಬೇರೆಯವರ ಮನೆಯಲ್ಲಿ ಊಟ ಮಾಡಬಾರದು ಎಂಬ ವಿಷಯ ಇಲ್ಲಿದೆ
ಅಮಾವಾಸ್ಯೆ ದಿನದಂದು ಬೇರೆಯವರ ಊಟವನ್ನು ಸೇವನೆ ಮಾಡಬಾರದು. ತಿಂಗಳ ಪೂರ್ತಿ ಸಂಪಾದಿಸಿದ ಪುಣ್ಯ ಕಳೆದು ಹೋಗುತ್ತದೆ. ಯಾರ ಊಟವನ್ನು ನೀವು ಸೇವನೆ ಮಾಡಿರುತ್ತೀರೋ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಸಂಕ್ರಾತಿಯ ದಿನದಂದೂ ಬೇರೆಯವರ ಊಟವನ್ನು ಸೇವನೆ ಮಾಡಬಾರದು.
ಉತ್ತರಾಯಣ ಅಥವಾ ದಕ್ಷಿಣಾಯಣ ಆರಂಭವಾಗುವ ದಿನ ಕೂಡ ಬೇರೆಯವರ ಅನ್ನ ಸೇವನೆ ಮಾಡಬೇಡಿ.
ಮನುಸ್ಮೃತಿಯ ಪ್ರಕಾರ ಯಾವ ವ್ಯಕ್ತಿ ಅತಿ ಆಸೆಗೆ ಬಿದ್ದು ಬೇರೆಯವರ ಮನೆಯಲ್ಲಿ ಊಟ ಮಾಡ್ತಾನೋ ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ಆ ಮನೆಯ ಊಟ ತಿನ್ನುವ ಪಶುವಾಗಿ ಜನಿಸ್ತಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ